



ನವದೆಹಲಿ: ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಸದಾ ಬೆಂಬಸುವುದರಲ್ಲಿ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಹೆಸರುವಾಸಿಯಾಗಿದ್ದಾರೆ.
ಈ ಬಾರಿ 4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ಮಹಿಳಾ ತೋಳಿಲ್ಲದ ಬಿಲ್ಲುಗಾರ್ತಿ, ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಿದ ಗಮನಾರ್ಹ ಶೀತಲ್ ದೇವಿ ಅವರಿಗೆ ಆನಂದ್ ಮಹೀಂದ್ರಾ ಹೃತ್ಪೂರ್ವಕ ಅಭಿನಂದನೆಯನ್ನು ತಿಳಿಸಿದ್ದಾರೆ.
ಮಹೀಂದ್ರಾ, ಶೀತಲ್ ದೇವಿಯವರ ಅದಮ್ಯ ಚೇತನಕ್ಕೆ ಭಾವುಕರಾದರು. ʻಇನ್ನು ಮುಂದೆ ಕ್ಷುಲ್ಲಕ ಸವಾಲುಗಳ ಬಗ್ಗೆ ಎಂದಿಗೂ ದೂರು ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು ಮತ್ತು ಎಲ್ಲರಿಗೂ ಇವರು ಮಾರ್ಗದರ್ಶನ ನೀಡುವ ಬೆಳಕುʼ ಎಂದು ಶ್ಲಾಘಿಸಿದರು.
ಜತೆಗೆ "ನಮ್ಮಲ್ಲಿರುವ ಯಾವ್ದೇ ಕಾರನ್ನು ನೀವು ಸೆಲೆಕ್ಟ್ ಮಾಡ್ಕೊಳಿ" ಎಂದು ಹೇಳುವ ಮೂಲಕ ಶೀತಲ್ ದೇವಿಗೆ ಉಡುಗೊರೆಯಾಗಿ ಮಹೀಂದ್ರಾ ದಿಂದ ಕಾರನ್ನು ನೀಡಲಾಗುವುದು ಎಂದು ಘೋಷಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.